ಸುವಿನ್ ಸಿನಿಮಾಸ್ ಲಾಂಛನದಲ್ಲಿ ಹೇಮಂತ್, ಸುರೇಶ್ ಭೈರಸಂದ್ರ ಹಾಗೂ ಅಭಿ ನಿರ್ಮಿಸಿರುವ, ಉಮೇಶ್ ಬಣಕಾರ್ ಅರ್ಪಿಸುವ ‘ಬಹುಪರಾಕ್’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರದ ಖ್ಯಾತಿಯ ಸುನಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಶ್ರೀನಗರ ಕಿಟ್ಟಿ ಅಭಿನಯಿಸಿದ್ದಾರೆ. ಮೇಘನಾರಾಜ್, ಭಾವನಾರಾವ್(ಗಾಳಿಪಟ), ಸುಂದರರಾಜ್, ಪ್ರಮಿಳಾಜೋಷಾಯಿ, ಮಾನಸ ಜೋಷಿ, ಸುಕೃತ ವಾಗ್ಲೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಬಿ.ಜೆ.ಭರತ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಮನೋಹರ್ ಜೋಷಿ ಅವರ ಛಾಯಾಗ್ರಹಣವಿದೆ. ಸಚಿನ್ ಸಂಕಲನ, ಮಾಸ್ಮಾದ ಸಾಹಸ ನಿರ್ದೇಶನ ‘ಬಹುಪರಾಕ್’ ಚಿತ್ರಕ್ಕಿದೆ.